Ave Maria ep 1
ಸೆಪ್ಟೆಂಬರ್ 1 -ಪರಿಶುದ್ಧ ಮರಿಯಮ್ಮನವರನು ತಾಯಿಯಾಗಿ ಸ್ವೀಕರಿಸಿ (ಯೋಹಾನ 19:27).
ಅವನು ಶಿಷ್ಯನಿಗೆ - ಇಗೋ, ನಿನ್ನ ತಾಯಿ! ಅಲ್ಲಿಂದೀಚೆಗೆ ಶಿಷ್ಯ ಅವಳನ್ನು ತನ್ನ ಸ್ವಂತ ಮನೆಗೆ ಕರೆದೊಯ್ದನು.
ಯೋಹಾನ 19:27.
ನಾವೆಲ್ಲರೂ ಜೀವನದ ಅನೇಕ ಕಠಿಣ ಹಂತಗಳಲ್ಲಿ ತಾಯಿಯ ಉಪಸ್ಥಿತಿಯನ್ನು ಬಯಸುತೆವೆ.ನಾವು ಅನಾರೋಗ್ಯಕ್ಕೊಳಗಾದಾಗ ಅಥವಾ ಸೋತು ಹೋಗುವ ಸಂದರ್ಭಗಳಲ್ಲಿ, ನಮ್ಮ ತಾಯಿ ನಮ್ಮೊಂದಿಗಿದ್ದರೆ ನಾವು ಅದನ್ನು ಮರೆತು ಬಿಡುತ್ತೇವೆ. ಯೇಸು ಸ್ವಾಮಿ ನಮಗೆ ನೀಡಿದ ದೊಡ್ಡ ಕೊಡುಗೆ ಪರಿಶುದ್ಧ ಮರಿಯಮ್ಮನವರು . ಕನ್ಯಾಗ ಮತಯಾ ಉತ್ತಮ ಮಕ್ಕಳಾಗಿರಿ. ತಾಯಿಯ ನಿಳುವಂಗಿಯೊಳಗೆ ಆಶ್ರಯ ಪಡೆಯಿರಿ.
ನಾವು ಪ್ರಾರ್ಥಿಸೋಣ
ತಾಯಿ, ನಿನ್ನ ಮಗನಾದ ನನ್ನನ್ನು ಎಲ್ಲಾ ಪಾಪಗಳಿಂದ ದೂರವಿಡಿ .. ಆಮೆನ್
ಆವೇ ಮರಿಯಾ ep 2
ಮಾತೆ ಮರಿಯಳ ಹಾಗೇ ಎಲ್ಲ ವಿಷಯಗಳನ್ನು ಹೃದಯದಲ್ಲಿ ಸಂಗ್ರಹಿಸಿರಿ (ಲೂಕ 2:19)
ಆದರೆ ಮಾತೆ ಮರಿಯಳು ಈ ಎಲ್ಲ ಸಂಗತಿಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಅವುಗಳನ್ನು ಧ್ಯಾನಿಸುತ್ತಿದ್ದಳು.
ಲೂಕ 2:19.
ದೇವದೂತರ ಮಾತುಗಳಿಗೆ ಆಕಸ್ಮಿಕವಾಗಿ ಒಪ್ಪಿದವರಲ್ಲಾ ಮಾತೆ ಮರಿಯಮ್ಮನವರು , ಇದು ಉದ್ದೇಶಪೂರ್ವಕವಾದದ್ದು.ಕ್ಯಾಥೊಲಿಕ್ ಸಭೆಯ ಆರಾಧನೆ ವಿಧಿಯಲೋoದದಾ ಧ್ಯಾನದ ಬಗ್ಗೆ ಮತ ಗ್ರoಥವು ಹೀಗೆ ಹೇಳುತ್ತದೆ " ಧ್ಯಾನದ ಮೂಲಕ ಒಬ್ಬನು ಸುವಾರ್ತಯೋoದಿಗೆ ತನ್ನ ಜೀವನದಿoದ ಹೇಗೆ ಉತ್ತರಿಸಬೇಕು ಮತ್ತೆ ಯಾಕೆ ಉತ್ತರಿಸಬೇಕೆoದೂ ತಿಳಿಯುತ್ತದ. ಮಾತೆ ಮರಿಯಳು ಧ್ಯಾನಿಸಿದoತೆ ನಾವು ನಮ್ಮ ಸ್ವಂತ ಜೀವನದ ಅನುಭವಗಳನ್ನು ಧ್ಯಾನಿಸೋಣ ಮತ್ತು ದೇವರು ಬಯಸುವ ನಿರ್ಧಾರವನ್ನು ತೆಗೆದುಕೊಳ್ಳೋಣ.
ನಾವು ಪ್ರಾರ್ಥಿಸೋಣ
. ತಾಯಿಯೇ, ನನ್ನ ಜೀವನದ ಅನುಭವಗಳನ್ನು ಧ್ಯಾನಿಸಲು ಮತ್ತು ದೇವರ ಚಿತ್ತಕ್ಕೆ ಅನುಗುಣವಾಗಿ ಬದುಕಲು ನನಗೆ ಸಹಾಯ ಮಾಡಿ .. ಆಮೆನ್
ಆವೇ ಮರಿಯಾ ep 3
ಸೆಪ್ಟೆಂಬರ್ 03
ಮಾತೆ ಮರಿಯಳ ಹಾಗೇ ದೇವರನ್ನು ಆಲಿಸಿ (ಯೋಹಾನ 2: 5).
ಅವನ ತಾಯಿ ಪರಿಚಾರಕರಿಗೆ, "ಅವನು ನಿಮಗೆ ಹೇಳುದನ್ನು ಮಾಡಿ" ಎಂದು ಹೇಳಿದಳು .
ಯೋಹಾನ 2: 5.
ನಾವು ಜೀವನದಲ್ಲಿ ಸೋತು ಹೋಯಿತು, ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ ಅವಾಗ ಕನ್ಯಾ ಮತಯಾ ಮಾತುಗಳನ್ನು ಕೇಳಿ ನಡೇಯೋಣ. ಯೇಸು ಸ್ವಾಮಿ ದೇವರ ವಾಕ್ಯದ ಮೂಲಕ ನಮ್ಮೊಂದಿಗೆ ಮಾತನಾಡುತ್ತಾನೆ.ನಮಗೆ ಪ್ರತಿದಿನ ದೇವರ ವಚನವನ್ನು ಓದೋಣ.
ನನ್ನ ತಾಯಿಯೇ, ನನ್ನ ಜೀವನದ ಆತಂಕಗಳು ಮತ್ತು ಸಮಸ್ಯೆಗಳಲ್ಲಿ ನಿಮ್ಮ ಪ್ರೀತಿಯ ಮಗನ ಶಾಂತಿಯ ಮಾತುಗಳನ್ನು, ದೇವರ ವಚನದ ಮೂಲಕ ಕೇಳುವ ಪ್ರಕಾರ ಶಾಂತಿಯಿಂದ ಬದುಕಲು ನನಗೆ ಸಹಾಯ ಮಾಡಿ .. ಆಮೆನ್
ಆವೇ ಮರಿಯಾ ep4
ಸೆಪ್ಟೆಂಬರ್ 4
ದೇವರ ಚಿತ್ತವನ್ನು ಸ್ವೀಕರಿಸಿ (ಲೂಕ 1:38)
ಮಾತೆ ಮರಿಯಳು - ಇಗೋ, ಕರ್ತನ ಸೇವಕಿ; ನಿಮ್ಮ ಮಾತು ನನ್ನಲ್ಲಿ ನಿಜವಾಗಲಿ!
ಲೂಕ 1:38
ನಮ್ಮ ಜೀವನವು ದೇವರ ಆರೈಕೆಯಲ್ಲಿದೆ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳದ ಕಾರಣ ನಾವು ಆಗಾಗ ದೇವರನ್ನು ದೂರುತೆವೆ ಮತ್ತು ದುಃಖಿಸುತ್ತೇವೆ.
ಇದಕ್ಕೆ ತದ್ವಿರುದ್ಧವಾಗಿ, ಸ್ವರ್ಗದಲ್ಲಿರುವ ನನ್ನ ತಂದೆಯ ಅರಿವಿಲ್ಲದೆ ನನಗೆ ಏನೂ ಆಗುವುದಿಲ್ಲ ಎಂದು ನಾವು ತಿಳಿದಾಗ, ಮಾತೆ ಮರಿಯಾಳು ಮಾಡಿದಂತೆ ನನ್ನ ಜೀವನದಲ್ಲಿ ದೇವರ ಚಿತ ನೆರವೇರಲಿ ಎಂದು ನಮಗೆ ಹೇಳಲು ಸಾಧ್ಯ .
ನಾವು ಪ್ರಾರ್ಥಿಸೋಣ
ಒಳ್ಳೆಯ ತಾಯಿಯೇ , ನನ್ನ ಜೀವನದಲ್ಲಿ, ನಿನ್ನ ಹಾಗೇ ದೇವರ ಚಿತ್ತಕ್ಕೆ ಆದ್ಯತೆ ನೀಡಲು ನನಗೆ ಸಹಾಯ ಮಾಡಿ .. ಆಮೆನ್
ಆವೇ ಮಾರಿಯಾ ep5
ಸೆಪ್ಟೆಂಬರ್ 5
ಭಯಪಡಬೇಡಿ, ದೇವರ ಕೃಪೆಯಿಂದ ಬಾಳಿರಿ
ಲೂಕ 1:30
ದೇವದೂತನು ಅವಳಿಗೆ - ಮರಿಯೇ, ಭಯಪಡಬೇಡ; ನೀನು ದೇವರ ದೃಷ್ಠಿಯಲ್ಲಿ ಕೃಪೆಯನ್ನು ಕಂಡುಕೊಂಡಿಧಿ
ಲೂಕ 1:30
ದೇವರ ಚಿತ್ತಕ್ಕೆ ಮಣಿದು ಜೀವಿಸಲು ಭಯಪಡುತೀರಾ ? ನನ್ನಯೊಂದಿಗೆ ಯಾರಾದರೂ ಇರುತಾರ ? ನನಗೆ ಸಹಾಯ ಮಾಡುವವರು ಯಾರು ? ಹೀಗಲಾ ನಮಗೆ ಅನಿಸಬಹುದು. ನಮ್ಮ ಹಳೆಯ ಜೀವನ ಹೇಗೆ ಇರಲಿ ಭಯಪಡಬೇಡ ದೇವರ ಅನುಗ್ರಹವು ನಮ್ಮೊಂದಿಗಿರುವಾಗ ನಾವು ಎಲ್ಲವನ್ನೂ ಮಾಡಬಹುದು. ಸಂತ ಪೌಲನು ಹೇಳುತ್ತಾನೆ, ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವನ್ನು ಮಾಡಬಹುದು. ದೇವರ ಅನುಗ್ರಹದಿಂದ ಮಾತೆ ಮರಿಯಾಳ ಹಾಗೇ ನಮಗೆ ಭಯ ಪಡದೆ ಬದುಕಳು ಸಾಧ್ಯವಾಗುತ್ತೆ.
ನಾವು ಪ್ರಾರ್ಥಿಸೋಣ
ನನ್ನ ತಾಯಿಯೇ, ದೇವರ ಅನುಗ್ರಹದಿಂದ ಧೈರ್ಯದಿಂದ ಬದುಕಲು ನಮಗೆ ಕಲಿಸಿ .. ಆಮೆನ್
ಆವೇ ಮರಿಯಾ ep 6
ಯೇಸು ಸ್ವಾಮಿಯ ಕುಟುಂಬಕ್ಕೆ ಸೇರಿ. ಮತ್ತಾಯ 12:50
ಯೇಸು ಅವರಿಗೆ, “ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಈಡೇರಿಸುವವನು ನನ್ನ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.
ಮತ್ತಾಯ 12:50
ನಮಗೆ ಅತಿಯಾದ ಪ್ರೀತಿ , ನoಟು ನಮ್ಮ ಕುಟುಂಬಸ್ಥ ರೋoದಿಗೆ.ಯೇಸು ಸ್ವಾಮಿಯವರ ಕುಟುಂಬದ ಸದಸ್ಯರಾಗಲು ಬಯಸುವಿರಾ?ಅದೆಕ್ಕೆ ಒಂದು ದಾರಿ ಇದೆ.ಮಾತೆ ಮರಿಯಳಾ ಹಾಗೇ ಸ್ವರ್ಗೀಯ ತಂದೆಯ ಚಿತ್ತವನ್ನು ಈಡೇರಿಸಿ ಅದರಂತೆ ಬದುಕು.
ನಾವು ಪ್ರಾರ್ಥಿಸೋಣ
ತಾಯಿಯೇ, ನಾವೂ ಸಹ ಜ್ಞಾನಸ್ನಾನದ ಮೂಲಕ ದೇವರ ಕುಟುಂಬದ ಪ್ರೀತಿಯ ಮಕ್ಕಳಾಗಿದ್ದೇವೆ.ನಮ್ಮ ಸ್ವರ್ಗೀಯ ತಂದೆಯ ಚಿತ್ತವನ್ನು ಯಾವಾಗಲೂ ಅರ್ಥಮಾಡಿಕೊಳ್ಳಲು ಮತ್ತು ಬದುಕಲು ನಮಗೆ ಸಹಾಯ ಮಾಡಿ ... ಆಮೆನ್
ಆವೇ ಮರಿಯಾ ep7
ಸೆಪ್ಟೆಂಬರ್ 07
ತಾಳ್ಮೆಯಿಂದ ಶಿಲುಬೆಯಲ್ಲಿರುವ ಯೇಸುವನ್ನು ಮತು ಹತ್ತಿರದಲಿರುವ ಮಾತೆ ಮರಿಯಳನು ನೋಡಿ.ಯೋಹಾನ 19:25
ಯೇಸುವಿನ ತಾಯಿ ಶಿಲುಬೆಯ ಪಕ್ಕದಲ್ಲಿ ನಿಂತಿದ್ದಳು.
ಯೋಹಾನ 19:25
ನಾವು ಯೇಸುವಿನ ಹತ್ತಿರದಲ್ಲಿದ್ದರೆ ನಮ್ಮ ಜೀವನದಲ್ಲಿ ಯಾವುದೇ ನೋವು ಇರುವುದಿಲ್ಲವೆoದು ನಾವು ಭಾವಿಸಬಾರದು. ಆದರೆ ಯೇಸು ನಮ್ಮ ದುಃಖವನ್ನು ಪ್ರೀತಿಯಿಂದ ಸ್ವೀಕರಿಸಲು ಕಲಿಸುವನು.ಶಿಲುಬೆಗೇರಿಸಿದ ಯೇಸು ಮತ್ತು ಮಾತೆ ಮರಿಯಾ , ನಮ್ಮ ದುಃಖದ ಏಕಾಂಗಿ ಕ್ಷಣಗಳಲ್ಲಿ ನಮಗೆ ಸಾಂತ್ವನ ನೀಡಲಿ.
ನಾವು ಪ್ರಾರ್ಥಿಸೋಣ
ತಾಯಿಯೇ , ನಮ್ಮ ಜೀವನದಲ್ಲಿ ದುಃಖ ಮತ್ತು ನೋವು ಇದ್ದಾಗ, ಅದನ್ನು ನಿನ್ನನೊಂದಿಗೆ ಮತ್ತು ನಿನ್ನ ಪ್ರೀತಿಯ ಮಗನಾದ ಯೇಸುವಿನೊಂದಿಗೆ ಸಹಿಸಿಕೊಳ್ಳುವ ಅನುಗ್ರಹವನ್ನು ನಮಗೆ ನೀಡಿ. ಆಮೆನ್.
ಆವೇ ಮರಿಯಾ ep 8
ಸೆಪ್ಟೆಂಬರ್ 08
ಮಾತೆ ಮರಿಯಾಳ ಹಾಗೇ ಧರ್ಮಸಭಯೊಂದಿಗೆ ದೇವರನ್ನು ಆರಾಧಿಸಿ.
ಪ್ರೆಷಿತರ ಕಾರ್ಯಕಲಾಪಗಳು 1:14.
ಅವರು ಏಕ ಚಿತ್ತದಿಂದ ಯೇಸುವಿನ ತಾಯಿಯಾದ ಮರಿಯಳೋoದಿಗೆ ಮತ್ತು ಇತರ ಸ್ತ್ರೀಯರೂ ಅವನ ಸಹೋದರರೋoದಿಗೆ ಪ್ರಾರ್ಥನೆಯಲ್ಲಿ ತೊಡಗಿದ್ದರು.
ಪ್ರೆಷಿತರ ಕಾರ್ಯಕಲಾಪಗಳು 1:14.
ಯೇಸು ವಾಗ್ದಾನ ಮಾಡಿದ ಪವಿತ್ರಾತ್ಮರ ಆಗಮನಕ್ಕಾಗಿ ಪ್ರಾರ್ಥನೆ ಯಲ್ಲಿರುವ ತಾಯಿಯನ್ನು ಪವಿತ್ರ ಗ್ರಂಥವು ನಮಗೆ ತೋರಿಸುತ್ತದೆ.ಯೇಸು ಆರಿಸಿದ ಹನ್ನೆರಡು ಅಪೊಸ್ತಲರೊಂದಿಗೆ ಮಾತೆ ಮರಿಯಾಳು ಜೊತೆಯಾಗಿ ಪ್ರಾರ್ಥಿಸಿದರು. ಯೇಸು ಕ್ರಿಸ್ಥರು ಎಂದಿಗೂ ಇರುವ, ಮತ್ತು ನಾವು ಇರಬೇಕೆಂದು ಬಯಸುವುದು ಪವಿತ್ರ ಧರ್ಮಾಸಭೆ ಆಗಿದೆ. ಯೇಸು ಸ್ವಾಮಿ ನಮನ್ನು ಮುಂದೆ ನಡಸುವುದು ಧರ್ಮಸಭಯೊಂದಿಗೆ . ಧರ್ಮಸಭೆಯ ಚಟುವಟಿಕೆಗಳಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳುವ ಮೂಲಕ ನಾವು ದೇವರನ್ನು ಆರಾದಿಸೊಣ ಮತ್ತು ಸ್ತುತಿಸೋಣ.
ನಾವು ಪ್ರಾರ್ಥಿಸೋಣ
ದೇವರು ತಾಯಿಯಾಗಿ ನಮಗೆ ನೀಡಿರುವ ಪವಿತ್ರ ಮಾತೆಯೇ, ಪ್ರಭು ಯೇಸು ಕ್ರಿಸ್ತರು ಸ್ಥಾಪಿಸಿ ನಮ್ಮ ನಿವೇಶನಕ್ಕಾಗಿ ನೀಡಿರುವ ಪವಿತ್ರ ಧರ್ಮಸಭಯೊಂದಿಗೆ ಸೇರಿ ದೇವರಿಗೆ ಹಿತಕರವಾದ ಆರಾಧನೆಯನ್ನು ಸಮರ್ಪಿಸಲು ಮತ್ತು ಪರಿಶುದ್ದರಾಗಿ ಬಾಳಲು ನಮಗೆ ನೆರವಾಗಿ ತಾಯೆ. ಆಮೆನ್